Welcome to Sai Niketan

About Us

Our Belief

ನಿನ್ನ ಬಾಳಿನ ಶಿಲ್ಪಿ ನೀನೇ......



ತನ್ನ ಆಸುಪಾಸಿನ ಜನಸಾಮಾನ್ಯರು ಬಿರುಗಾಳಿಗೊಡ್ಡಿದ ತರಗಲೆಗಳಂತೆ ಚೆದುರಿ ನಿರ್ನಾಮವಾಗುವಾಗ, ಏಕನಿಷ್ಠೆ ಹಾಗೂ ಏಕಾಗ್ರತೆಯಿಂದ ಬಿಡದ ಛಲದೊಂದಿಗೆ ಮುನ್ನುಗ್ಗಿ, ಮನಚಾಂಚಲ್ಯವನ್ನು ಬಡಿದಟ್ಟುವ ಪ್ರಯತ್ನಶೀಲ ವ್ಯಕ್ತಿ ಮಾತ್ರನೇ, ಮುಗಿಲೆತ್ತರಕ್ಕೇರಿ ಗೋಪುರದಂತೆ ದೃಢವಾಗಿ ಕಂಗೋಳಿಸುತ್ತಾನೆ.-«°ಯಂ ಜೇªÀiïì

ನಾವು ಸಧ್ಯ ಏನಾಗಿರುವೆವೋ ಅದು ನಮ್ಮ ಯೋಚನೆಯ ಫಲ ಯೋಚನೆಗಳೇ ಈಗಿನ ನಮ್ಮ ಸ್ಥಿತಿಗೆ ತಳಹದಿ, ನಡೆನುಡಿಯಲ್ಲಿ ನಮ್ಮ ಯೋಚನೆ ಒಳ್ಳೆಯದಾಗಿದ್ದರೆ ನೆರಳಿನಂತೆ ಸುಖವು ಹಿಂಬಾಲಿಸುತ್ತದೆ; ನಮ್ಮ ಯೋಚನೆ ಕೆಟ್ಟದ್ದಾದರೆ ದುಃಖವು ಬೆಂಬತ್ತಿ ಬರುತ್ತದೆ. UËvÀªÀÄ §ÄzÀÞ

¸Áಧನೆಗೆ ಅಸಾಧ್ಯವಾದುದು AiÀiÁವುದೂ ಇಲ್ಲ. ಆದರೆ ಅದನ್ನು ಸಾಧಿಸಿಯೇ ತೀರಬೇಕೆಂಬ ಛಲ ಮನುಷ್ಯನಲ್ಲಿರಬೇಕು. ಜಗತ್ತಿನಲ್ಲಿ ಯಶಸ್ಸು ಪಡೆದಿತಕ್ಕಂತಹ 100 ಜನರಲ್ಲಿ 90 ರಷ್ಟು ಜನರ ಜೀವನ ಚರಿತ್ರೆ ಅವರ ಬಡತನದಿಂದಲೇ ಬಂದಿರುತ್ತದೆ, ಅಂದರೆ ಬಡತನದಿಂದ ಆ ಯಶಸ್ಸನ್ನು ಪಡೆಯಲು ಅದೇ ವ್ಯಕ್ತಿ ಕಾರಣಿಭೂತನಾಗಿರುತ್ತಾನೆ. ಆದ್ದರಿಂದ ಹೇಳುವುದು ನಿನ್ನಲ್ಲಿ ಅಪಾರ ಶಕ್ತಿಯಿದೆ, ಮತ್ತು ನೀನೆ ನಿನ್ನ ಬಾಳಿನ ಶಿಲ್ಪಿ,

ನಮ್ಮ ಶಕ್ತಿಯ ವಿರಾಟ ರೂಪವನ್ನು ಪರೀಕ್ಷಿಸಲು PÉಳಗಿನ ಒಂದು ಸಂಗತಿಯನ್ನು ಗಮನಿಸಿ, ಕೆಲವು ಜನ ಸಮುದ್ರ ತೀರಕ್ಕೆ ಹೋಗುತ್ತಾರೆ, ಅದರ ಸೌಂದರ್ಯವನ್ನು ಹೊಗಳಿ ಅಲ್ಲಿಯೇ ಮನರಂಜನೆಯನ್ನು ಪಡೆದು ಬರುವಾಗ ತಮ್ಮ ಜೊತೆ ಮರಳನ್ನು ತರುತ್ತಾರೆ. ಇನ್ನೂ ಕೆಲವಷ್ಟು ಮೀನುಗಾರರು ಸಮುದ್ರ ತೀರದಿಂದ ಕೆಲವು ಮೈಲುಗಳು ದೂರ ಚಲಿಸಿ, ಮೀನುಗಾರಿಕೆ ಮಾಡುವುದರ ಮುಖಾಂತರ ಮರಳಿ ಬರುವಾಗ ಕೆಲವೊಂದಿಷ್ಟು ಮೀನುಗಳನ್ನು ತಂದು ಸಾವಿರಾರು ರೂಪಾಯಿಗಳನ್ನು ಸಂಪಾದಿಸುತ್ತಾರೆ. ಇನ್ನೂ ಕೆಲವೊಂದಿಷ್ಟು ಧೈರ್ಯಶಾಲಿಗಳು ನೂರಾರು ಮೈಲುಗಳ ದೂರ ªÁರಪೂರ್ಣ ಚಲಿಸಿ ತಮ್ಮ ಜೀವವನ್ನೇ ಲೆಕ್ಕಿಸದೆ ಆಳವಾದ ಸಮುದ್ರದಲ್ಲಿ ಮೀನುಗಾರಿಕೆ ಮಾಡಿ ಮರಳುವಾಗ ಮುತ್ತುಗಳನ್ನು ತೆಗೆದುಕೊಂಡು ಬರುತ್ತಾರೆ. ಅಲ್ಲದೇ ತಮ್ಮನ್ನು ಶ್ರೀಮಂತರ ಪಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. ನೆನಪಿಡಿ ಎಲ್ಲರಿಗೂ ಸಮುದ್ರ ಒಂದೇ! ಕೆಲವರು ಮರಳನ್ನು ತಂದರೆ, ಇನ್ನೂ ಕೆಲವರು ಮೀನನ್ನು ತರುತ್ತಾರೆ, ಮತ್ತೆ ಕೆಲವರು ಮುತ್ತುಗಳನ್ನು ತಂದು ತಮ್ಮ ಜೀವನವನ್ನು ಸುಂದರಗೊಳಿಸುತ್ತಾರೆ. ಇದರರ್ಥ ಎಲ್ಲರಿಗೂ ಜಗತ್ತು ಒಂದೇ, ಆದರೆ ನಮ್ಮ ಜೀವನ ರೂಪಿಸಿಕೊಳ್ಳುವುದು. ನಮ್ಮ ಕೈಯಲ್ಲಿಯೇ ಇದೆ.

ಯಾವುದೇ ಒಬ್ಬ ವ್ಯಕ್ತಿ ಬೆಳೆಯಲು ಅವರ ವಿಚಾರ ಧಾರೆಗಳು ಅವನ ನಾಯಕತ್ವ ಗುಣ ಬಹುಮುಖ್ಯ ಯಾರ ಏಳಿಗೆಗೂ ಯಾರೂ ಕಾರಣರಲ್ಲ, ಅವರವರ ಏಳಿಗೆಗೆ ಅವರೇ ಕಾರಣ, ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವ ಧಿರುಬಾಯಿ ಅಂಬಾನಿ ತನ್ನ ದೂರದೃಷ್ಟಿಯಿಂದ ರಿಲಾಯಿನ್ಸ್ ಎಂಬ ಸಂಸ್ಥೆ ಕಟ್ಟಿ ಜಗತ್ತಿನ ಮೂಲೆ ಮೂಲೆಗಳಲ್ಲಿ ತನ್ನ ವಹಿವಾಟು ವಿಸ್ತರಿಸಿದ್ದಾನೆ. ಅವನ ಯೋಜನೆಗಳು, ಅವನ ಪರಿಶ್ರಮ ಅವನನ್ನು ಆ ಮಟ್ಟಕ್ಕೆ ನಿಲ್ಲಿಸಿದೆ. ಅಲ್ಲದೇ ಅನೇಕ ಜನರಿಗೆ ಜೀವನ ನೀಡುವುದರ ಜೊತೆಗೆ ಸಮಾಜದಲ್ಲಿ ಅವರಿಗೆ ಸ್ಥಾನ ಮಾನ ದೊರೆಯುವಂತೆ ಮಾಡಿದ್ದಾನೆ. ಅದನ್ನು ಬಿಟ್ಟು ಅಲ್ಲಿರುವ ಒಬ್ಬ ಮ್ಯಾನೇಜರ್ ಅಥವಾ ಕ್ಯಾಶಿಯರ್ ನಾನು ದುಡಿದ ಹಣದಿಂದ ಅಂಬಾನಿ ಸಾಮ್ರಾಜ್ಯ ಕಟ್ಟಿದ್ದಾನೆಂದರೆ ಹಾಸ್ಯಾಸ್ಪದವಲ್ಲವೇ? ಅವನಿಗೆ ಅವನೇ ಶಿಲ್ಪಿ, ಅದಕ್ಕೇ ಹೇಳುವುದು ಅಶಕ್ತ ಆಪಾದಿಸುತ್ತಾನೆ, ಸಶಕ್ತ ಸಾಧಿಸುತ್ತಾನೆ.

ವಿವೇಕಾನಂದರು ಹೇಳಿದಂತೆ ಬೇಟೆಯಾಡುವದಿದ್ದರೆ WÉÃAಡಾಮೃಗವನ್ನೆ ಬೇಟೆಯಾಡು, ದರೋಡ ಮಾಡುವದಿದ್ದರೆ ರಾಜ ಸಂಸ್ಥಾವನ್ನೇ ದರೋಡೆ ಮಾಡು, ಆದರೆ ಬೇಟೆಗಾರನೆಂದು ಸಣ್ಣ ಪ್ರಾಣಿ ಕೊಲ್ಲಬೇಡ, ದರೋಡೆಕೊರನೆಂದು ಸಣ್ಣ ಕಳ್ಳತನ ಮಾಡಬೇಡ ಅದು ವೃತ್ತಿ ಅಪಮಾನ ಮಾಡಿದಂತೆ. ಆದ್ದರಿಂದ ನೀವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಸಂಪೂರ್ಣ ತೊಡಗಿಸಿಕೊಳ್ಳಬೇಕು, ಆಗ ಮಾತ್ರ ಸಾಧನೆ ಸಾಧ್ಯ. ವೈಯಕ್ತಿವಾಗಿ ನನಗೂ ಸಹಿತ 100% ತೊಡಗಿಸಿದಾಗ ಆಗುವ ಹಾಗೂ 20% ತೊಡಗಿಸಿದಾಗ ಆಗುವ ಪರಿಣಾಮಗಳ ಅನುಭವವಿದೆ.

ಯಾವುದೇ ಒಬ್ಬ ವ್ಯಕ್ತಿ ವ್ಯಾಯಾಮ ಮಾಡುವುದರಿಂದ ತನ್ನ ಸ್ನಾಯುಗಳನ್ನು ಗಟ್ಟಿಗೊಳಿಸಬಹುದೇ ವಿನಃ ಬೇರೆಯವರು ಮಾಡುವ ವ್ಯಾಯಾಮವನ್ನು ನೋಡುವುದರಿಂದಲ್ಲ. ಒಂದು ಭಾರಿ ನಿರ್ಧರಿಸಿ ನನ್ನಲ್ಲಿ ಅಪಾರ ಶಕ್ತಿ ಇದೆ, ನಾನು ಅಶಕ್ತನಲ್ಲ, ನಾನು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಆಗ ನಿನ್ನಲ್ಲಿ ಅದ್ಭುತವಾದ ಒಂದು ಚೈತನ್ಯ ತುಂಬುತ್ತದೆ. ನೆನಪಿಡಿ ನಿನ್ನಷ್ಟಕ್ಕೆ ನೀನೆ ದಾರಿದೀಪ ಮತ್ತು ನಿನ್ನ ಜೀವನದ ಶಿಲ್ಪಿ ನೀನೆ!!!

ಶ್ರೀ ರಾಜೇಶ ವಾಲಿ

Contact Us

  • sainiketanschoolcollege@gmail.com
  • 9071928471 / 9071928481 / 9071928491/ 9071928479/ 9071928489
  • Siddrameshwar Nagar, Palae Road, Ranna Circle Mudhol - 587313
  • Near Danamma Temple, Kunchanur Circle, Jamkhandi
  • Kokatanur Road, Saigiri, Athani